ಶಿರಸಿ ನಗರದ ಗಣೇಶ ನಗರದಲ್ಲಿ ವಾಸವಾಗಿರುವ ಮೋಹನ್ ಮರಾಠಿ ಎಂಬುವವರ ಹಂದಿ ಸಾಕಾಣಿಕೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಅನಾರೋಗ್ಯ ಮತ್ತು ದುರ್ವಾಸನೆ ಕಾಡುತ್ತಿದೆ ಎಂದು ಆರೋಪಿಸಿ, ಜನರು ಅವರ ಮನೆಯ ಮುಂದೆ ಪ್ರತಿಭಟನೆ ಗುರುವಾರ ಮಧ್ಯಾಹ್ನ 2.45ರವರೆಗೆ ನಡೆಸಿದರು. ಈ ಬಗ್ಗೆ ಎರಡು ವರ್ಷದ ಹಿಂದೆ ನಗರಸಭೆ ಹಂದಿಗಳನ್ನು ಸ್ಥಳಾಂತರಿಸುವಂತೆ ನೋಟಿಸ್ ನೀಡಿತ್ತು. ಆದರೆ, ಮೋಹನ್ ಆ ನೋಟಿಸನ್ನು ನಿರ್ಲಕ್ಷಿಸಿ ಅದೇ ಸ್ಥಳದಲ್ಲಿ ವೃತ್ತಿ ಮುಂದುವರಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.