ಯಳಂದೂರು ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯು ಶಾಸಕರಾದ ಎಆರ್.ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಈ ವೇಳೆ ಶಾಸಕರು ಮಾತನಾಡಿ ಪಟ್ಟಣದ ವ್ಯಾಪ್ತಿಯಲ್ಲಿರುವ ಆಶ್ರಯ ಬಡಾವಣೆಯಲ್ಲಿ ಕೆಲವು ನಿವೇಶನಗಳನ್ನು ಮಾರಾಟ ಮಾಡಲಾಗಿದ್ದು ಕ್ರಮ ಪತ್ರದ ಆಧಾರದ ಮೇಲೆ ಖಾತೆ ಮಾಡುವುದರಿಂದ ಪಟ್ಟಣ ಪಂಚಾಯತಿಗೆ ಆದಾಯ ಸೃಷ್ಟಿಯಾಗುತ್ತದೆ ಜೊತೆಗೆ ನೀರಿನ ಕಂದಾಯ ವಸಲಿಗೂ ಸಹಕಾರವಾಗುತ್ತದೆ ಇದರಿಂದ ಪಟ್ಟಣ ಪಂಚಾಯತಿಯನ್ನು ಆರ್ಥಿಕವಾಗಿ ಸಬಲಗೊಳಿಸಬಹುದು ಎಂದು ತಿಳಿಸಿದರು