ವ್ಯಾಟ್ಸಪ್ ಗೆ ಬಂದ ಆಪ್ ಲಿಂಕ್ ಓಪನ್ ಮಾಡುತ್ತಿದಂತೆ ಬ್ಯಾಂಕ್ ಖಾತೆಯಲ್ಲಿದ್ದ 94.500 ರೂಪಾಯಿ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿರುವ ಘಡನೆ ನಡೆದಿದೆ. ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗ್ರಾಮದ ಚಂದ್ರಶೇಖರ್ ಅವರಿಗೆ ಹಣ ವಂಚನೆಯಾಗಿದೆ. ಚಂದ್ರಶೇಖರ್ ಅವರು ವ್ಯಾಟ್ಸಪ್ ನೋಡುತ್ತಿದ್ದಾಗ ಒಂದು ಆಪ್ ಲಿಂಕ್ ಬಂದಿತ್ತು ಅದನ್ನ ಓಪನ್ ಮಾಡುತ್ತದಂತೆ ಎರಡು ನಂಬರ್ ಗಳಿಂದ ಕರೆ ಬಂದಿತ್ತು ಈ ಕರೆಯನ್ನ ಸ್ವೀಕರಿಸಿದ ಕೆಲಮೆ ನಿಮಿಷಗಳಲ್ಲಿ ಇವರ ನಂಬರ್ ಬೇರೆ ನಂಬರ್ ಗೆ ಪಾರ್ವಡ್ ಆಗಿತ್ತು. ಇದಾದ ಕೆಲ ಹೊತ್ತಿನಲ್ಲೆ ಖಾತೆಯಲ್ಲಿದ್ದ ಹಣ ಬೇರೆಯವರಿಗೆ ವರ್ಗಾವಣೆ ಯಾಗಿತ್ತು. ಹಾಗಾಗಿ ಹಣ ವಂಚನೆಯಾಗಿರುವ ಬಗ್ಗೆ ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲು ಮಾಡಿದ್ದಾರೆ.