ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರು ಗ್ರಾಮದ ರೈತ ಕಾಶಪ್ಪ ಕಂಬಳಿ ಅಮಾವಾಸ್ಯೆ ಪ್ರಯುಕ್ತ ಕೃಷ್ಣ ನದಿಯಲ್ಲಿ ಎತ್ತುಗಳನ್ನು ತೊಳೆಯುವ ಸಂದರ್ಭದಲ್ಲಿ ಮೊಸಳೆ ಎಳೆದೊಯ್ದು ಮೃತನಾದ ಹಿನ್ನೆಲೆ ಸೋಮವಾರ ಸಾಯಂಕಾಲ 4ಗಂಟೆ ಸುಮಾರಿಗೆ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ ಪಾಟೀಲ್ ಮೃತ ಬಸಪ್ಪ ಕಂಬಳಿ ಕುಟುಂಬಕ್ಕೆ ಭೇಟಿಯಾಗಿ ಸಾಂತ್ವಾನ ಹೇಳಿ ಪರಿಹಾರ ವಿತರಿಸಿದರು. ಕುಟುಂಬಕ್ಕೆ ಆಸರೆಯಾಗಿದ್ದ ಬಸಪ್ಪ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಜನಪದ ನಿಧಿಗಳು ಉಪಸ್ಥಿತರಿದ್ದರು.