ಕಾಡು ಪ್ರಾಣಿಗಳಿಂದ ರೈತರು ಬೆಳೆದಿರುವ ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಆನೆಗಳ ಕಾಟದಿಂದ ಮುಕ್ತಿ ಸಿಗುತ್ತಿದ್ದಂತೆ ಇದೀಗ ಕಾಡಂದಿಗಳ ಉಪಲಾಟ ಶುರುವಾಗಿದೆ ಎಂದು ರೈತರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.ಪ್ರಚಾರಲಹಳ್ಳಿ ಗ್ರಾಮದ ಗೌರಮ್ಮಮುನಿರಾಜು ಎಂಬುವರ ತೋಟಕ್ಕೆ ಶುಕ್ರವಾರ ಕಾಡಂದಿಗಳು ಲಗ್ಗೆ ಇಟ್ಟು ಅವರು ಎರಡು ಎಕರೆ ಜಾಗದಲ್ಲಿ ಬೆಳೆದಿರುವ ಕಡಲೆ ಕಾಯಿ ಬೆಳೆಯನ್ನು ತಿಂದು ನಾಶಪಡಿಸಿವೆ.ಪ್ರತಿನಿತ್ಯ ರೈತರು ಕಾಡು ಪ್ರಾಣಿಗಳಿಂದ ಸಂಕಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅವುಗಳಿಂದ ಮುಕ್ತಿ ಸಿಗುವುದಾದರೂ ಯಾವಾಗ ಎಂದು ರೈತರು ಶನಿವಾರ ಅಸಹಾಯಕತೆಯನ್ನು ತೊರಿಕೊಂಡಿದ್ದಾರೆ.