ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ಮಾಜಿ ಸಂಸದ ಪ್ರತಾಪ್ ಸಿಂಹ ಅವರ ತಂದೆ ತಾಯಿ ದೈವ ಭಕ್ತರು ಇರಬೇಕು, ಅದಕ್ಕೆ ಪ್ರತಾಪ ಅಂತ ಅವರಿಗೆ ಹೆಸರಿಟ್ಟಿದ್ದಾರೆ. ಇಲ್ಲದಿದ್ದರೆ ಕೋತಿ ಅಂತ ನಾಮಕರಣ ಮಾಡುತ್ತಿದ್ದರು. ಪ್ರತಾಪ್ ಅವರಿಗೆ ಐಡೆಂಟಿಟಿ ಕ್ರೈಸಿಸ್ ಕಾಡ್ತಿದೆ. ಸಿಂಹ ಅಂತೆಲ್ಲ ನಾನು ಅವರನ್ನ ಕರೆಯಲ್ಲ. ಸಿಂಹ ಅಂದ್ರೆ ಘರ್ಜಿಸಬೇಕು ಬಾಯಿ ಬಡಿದುಕೊಳ್ಳಬಾರದು, ಪ್ರತಾಪ್ ಗೆ ಅಸ್ತಿತ್ವದ ಕೊರತೆ ಇದೇ, ಅಭಿವೃದ್ದಿ ಅಂತೂ ಇಲ್ಲ ಅವರಿಗೆ ಬಿಜೆಪಿಯವರು ಒದ್ದು ಹೊರಗೆ ಹಾಕಿದ್ದಾರೆ ಎಂದರು.