ದಾಂಡೇಲಿ : ದಾಂಡೇಲಿಯಲ್ಲಿ ವಾಹನಗಳ ಪಾರ್ಕಿಂಗಿಗೆ ಸೂಕ್ತ ಜಾಗ ಇಲ್ಲದೆ ಇರುವುದರಿಂದ, ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡಿ ಹೋಗುತ್ತಿರುವುದು ಮಾಮೂಲಿಯಾದರೇ, ಇತ್ತೀಚಿನ ಕೆಲವು ತಿಂಗಳಿಗಳಿಂದ ನಗರದ ಕೆ.ಸಿ ವೃತ್ತದ ಸಮೀಪದ ಬರ್ಚಿ ರಸ್ತೆಯ ಹತ್ತಿರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಆವರಣವನ್ನು ಬಿಡದೆ ಪಾರ್ಕಿಂಗ್ ಮಾಡಲಾಗುತ್ತಿದ್ದು, ಇದರಿಂದ ಪೆಟ್ರೋಲ್ ಪಂಪ್ ಮಾಲಕರಿಗೆ ಹಾಗೂ ಸಿಬ್ಬಂದಿಗಳಿಗೆ ಮತ್ತು ಗ್ರಾಹಕರಿಗೆ ತೀವ್ರ ಕಿರಿಕಿರಿಯಾಗತೊಡಗಿದೆ. ಅದು ಭಾನುವಾರವಂತೂ ಪೆಟ್ರೋಲ್ ಪಂಪ್ ಆವರಣದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲೊಂದರಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನಗಳು ಸೇರಿದಂತೆ ನಾಲ್ಕು ಚಕ್ರದ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ.