ಹುಬ್ಬಳ್ಳಿಯ ಮಂಗಳವಾರ ಪೇಟೆಯಲ್ಲಿ ಗಣೇಶೋತ್ಸವದ ಅಂಗವಾಗಿ ನಿರ್ಮಿಸಲಾದ ವಾರಣಾಸಿಯ ಐತಿಹಾಸಿಕ ಶ್ರೀ ಕಾಶಿ ವಿಶ್ವಾನಥ ಮಾದರಿಯ ಜ್ಯೋತಿರ್ಲಿಂಗ ಮಂಟಪ ಉದ್ಘಾಟನೆಯನ್ನು ನೆರವೇರಿಸಲಾಯಿತು. ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಮೂರರುದ್ರಾಕ್ಷಿ ಮಠದ ಪರಮಪೂಜ್ಯರಾದ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಈ ಜ್ಯೋತಿರ್ಲಿಂಗದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ನನ್ನೊಂದಿಗೆ ಶಾಸಕ ಮಹೇಶ ಟೆಂಗಿನಕಾಯಿ ಇದ್ದರು.