ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದಲ್ಲಿ ನಿತ್ಯ ಹೊಸ ತಿರುವುಗಳು ಬೆಳಕಿಗೆ ಬರುತ್ತಿವೆ. ಎಸ್‌ಐಟಿ ಕಸ್ಟಡಿಯಲ್ಲಿ ಇರುವ ಮುಖವಾಡದ ಚಿನ್ನಯ್ಯ ವಿಚಾರಣೆ ವೇಳೆ ತಾನು ಬೆಂಗಳೂರಿನಲ್ಲಿ ವಾಸವಿದ್ದು, ಕೆಲವರನ್ನು ಭೇಟಿಯಾಗಿದ್ದಾಗಿ ಹೇಳಿದ್ದಾನೆ. ಇದರ ಆಧಾರದ ಮೇಲೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿನ್ನಯ್ಯನನ್ನು ಪೀಣ್ಯದ ಮಲ್ಲಸಂದ್ರದ ಜಯಂತ್ ಬಾಡಿಗೆ ಮನೆಯಲ್ಲಿ ಮಹಜರ್‌ಗೆ ಕರೆತಂದಿದ್ದಾರೆ. ಅಲ್ಲದೇ, ಜಯಂತ್‌ಗೂ ಚಿನ್ನಯ್ಯಗೂ ಲಿಂಕ್ ಇದ್ದದ್ದು ಬಹಿರಂಗವಾಗಿದೆ. 2023ರಲ್ಲಿ ಜಯಂತ್ ಮನೆಯಲ್ಲಿ ಚಿನ್ನಯ್ಯ ಆಶ್ರಯ ಪಡೆದಿದ್ದನು, ಅಲ್ಲಿಂದಲೇ ಬೆಳ್ತಂಗಡಿ ನ್ಯಾಯಾಲಯ ಪ್ರವೇಶಿಸಿದ್ದನು ಎಂದು ತಿಳಿದುಬಂದಿದೆ. ಜಯಂತ್ ಹೇಳಿಕೆಯಲ್ಲಿ ಚಿನ್ನಯ್ಯನೇ ಬುರುಡೆ ತಂದಿದ್ದನೆಂದು ಒಪ್ಪಿಕೊಂಡಿದ್ದಾನೆ.