ಬುಧವಾರ ಸಂಜೆ 6 ಗಂಟೆ ಸುಮಾರಿಗೆ ವಿನಾಯಕ ಚತುರ್ಥಿ ಪ್ರಯುಕ್ತ ಗಣೇಶನ ಮೂರ್ತಿಗಳನ್ನು ಗಾಂಧಿನಗರ ಕ್ಷೇತ್ರದ ಕಾಟನ್ ಪೇಟೆ, ಕೆ.ಪಿ ಅಗ್ರಹಾರ, ದತ್ತಾತ್ರೇಯ ವಾರ್ಡ್, ಸ್ವತಂತ್ರ ಪಾಳ್ಯ ಸೇರಿದಂತೆ ಕ್ಷೇತ್ರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದು ಹಲವು ಕಡೆ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ವಿಘ್ನೇಶ್ವರನ ದರ್ಶನ ಪಡೆದರು. ಅಷ್ಟೇ ಅಲ್ಲದೆ ವಿವಿಧೆಡೆ ಏರ್ಪಡಿಸಲಾಗಿದ್ದ ಅನ್ನದಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದರ ಜೊತೆಯಲ್ಲಿ ತಮ್ಮದೇ ಕ್ಷೇತ್ರವಾದ ಗಾಂಧಿನಗರ ಕಾಮಗಾರಿಗಳ ಪರಿಶೀಲನೆ ಮಾಡಿದರು.