ಕಾರವಾರ:ಇಲ್ಲಿನ ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಜಗದೀಶ ದೇಸಾಯಿ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಲಾಗಿದ್ದು ಅವರ ಖಾತೆಯಲ್ಲಿದ್ದ 57 ಸಾವಿರ ರೂ ಹಣವನ್ನು ಸೈಬರ್ ಕ್ರೈಂ ದೋಚಿದ್ದಾರೆ. ಪ್ರಕರಣ ಬಗ್ಗೆ ನಗರದ ಸಿಇಎನ್ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಗುರುವಾರ ಸಂಜೆ 6ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಆಗಸ್ಟ್ 25ರಂದು ಜಗದೀಶ ದೇಸಾಯಿ ಅವರಿಗೆ 2 ಸಾವಿರ ರೂ ಹಣ ಬೇಕಿತ್ತು. ಹೀಗಾಗಿ ಅವರು ಪಿಕಳೆ ರಸ್ತೆಯಲ್ಲಿರುವ ಎಚ್ಡಿಎಫ್ಸಿ ಬ್ಯಾಂಕಿನ ಎಟಿಎಂ ಅದನ್ನು ತೆಗೆದಿದ್ದರು. ಅದೇ ದಿನ ಸಂಜೆ ಅವರ ಬ್ಯಾಂಕ್ ಖಾತೆಯನ್ನು ಸೈಬರ್ ಕ್ರೈಂ ಜಾಲದವರು ಹ್ಯಾಕ್ ಮಾಡಿ ಖಾತೆಯಲ್ಲಿದ್ದ 57 ಸಾವಿರ ರೂ ಹಣ ದೋಚಿದ್ದಾರೆ