ತಾಲೂಕಿನ ಮುದಗಲ್ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕುರಿಗಳ ಸಂತೆಯಲ್ಲಿ, ಹುನುಕುಂಟಿ ಗ್ರಾಮದ ಬಸವರಾಜ ಕಿಲ್ಲಾರಹಟ್ಟಿ ಎಂಬುವರ 22 ಸಾವಿರ ರೂ. ಮೌಲ್ಯದ ಎರಡು ಕುರಿಗಳನ್ನು ಹಣ ಕೊಡದೆ ಕಳ್ಳತನ ಮಾಡಲಾಗಿದೆ. ಈ ಘಟನೆ ಆಗಸ್ಟ್ 31 ರ ರವಿವಾರ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ತಂದೆ ಮಗ ಇಬ್ಬರು ಕುರಿ ಮಾರಲು ಸಂತೆಗೆ ಹೋದಾಗ, ಮಗನ ಬಳಿ 11 ಸಾವಿರಕ್ಕೆ ಒಂದು ಕುರಿ ರೇಟ್ ಕುದುರಿಸಲಾಗಿದೆ. ಆಗ ಸ್ವಲ್ಪ ದೂರದಲ್ಲಿದ್ದ ತಂದೆಯನ್ನ ಕೇಳಿ ಬರುತ್ತೇನೆ ಎಂದು ಹೋದ ಸಂದರ್ಭ ವ್ಯಕ್ತಿಯೋರ್ವ ಎರಡು ಕುರಿಗಳ ಹಣ ಕೊಡದೆ ಹೊಡೆದುಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮುದಗಲ್ ಠಾಣೆಯ ಪಿಎಸ್ಐ ವೆಂಕಟೇಶ್ ಸೆ.4 ರ ಗುರುವಾರ ಪಬ್ಲಿಕ