ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಭದ್ರಾ ಹಿನ್ನೀರಿನ ತೀರದಲ್ಲಿ ವಾಸಿಸುವ ರಾವೂರು ಕ್ಯಾಂಪ್‌ನ ಮೀನುಗಾರರ ಬದುಕು ನೋಡಿದ್ರೆ ನಿಜಕ್ಕೂ ಬೇಸರ ತರಿಸುತ್ತೆ. ಈ ಊರಲ್ಲಿ ಮೀನುಗಾರರ ಕುಟುಂಬಗಳು ವಾಸಿಸುತ್ತಿವೆ ಇವರಲ್ಲಿ ಯಾರದ್ರು ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ. ರಾವೂರು ಕ್ಯಾಂಪ್ ಭದ್ರಾ ಹಿನ್ನೀರಿನ ತೀರದಲ್ಲಿರುವುದರಿಂದ ಮಳೆಗಾಲದಲ್ಲಿ ಮನೆ ಹಿಂಬದಿಯವರೆಗೂ ಹಿನ್ನೀರು ತುಂಬಿಕೊಂಡು ವಾಸ ಸ್ಥಳವೇ ಮುಳುಗಡೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಶವ ಸಂಸ್ಕಾರ ನಡೆಸಲು ಜಾಗವಿಲ್ಲದೆ, ಮೃತದೇಹವನ್ನು ತೆಪ್ಪದಲ್ಲಿ ತೆಗೆದುಕೊಂಡು ಹೋಗಿ ಅಂತಿಮ ವಿಧಿ-ವಿಧಾನ ನೆರವೇರಿಸಬೇಕಾದ ದುಸ್ಥಿತಿ ಇಲ್ಲಿನ ಮೀನುಗಾರರದ್ದಾಗಿದೆ.