ರೌಡಿಶೀಟರ್ ಸುಶೀಲ್ ಕಾಳೆ ಹತ್ಯೆ ಪ್ರಕರಣದ ಆರೋಪಿ ತುಳಸಿರಾಮ್ ಹರಿಜನನ್ನು ವಶಕ್ಕೆ ಪಡೆಯಲಾಗಿದೆ. ಸುಶೀಲ್ ಕಾಳೆ ಹತ್ಯೆ ಮಾಡಲು ತುಳಸಿರಾಮ್ ಹರಿಜನ್ ತನ್ನ ಸಹಚರರಿಗೆ ಆದೇಶ ಮಾಡಿದನು. ಇನ್ನು ತುಳಸಿರಾಮನ ಆದೇಶದ ಮೇರೆಗೆ ಆರು ಜನರು ಸೇರಿಕೊಂಡು ನಗರದಲ್ಲಿ ಹತ್ಯೆ ಮಾಡಿದ್ದಾರೆ. ಆರು ಜನ ಆರೋಪಿಗಳು ತುಳಸಿರಾಮನನ್ನು ಕಲಬುರ್ಗಿ ಜೈಲಿಗೆ ಭೇಟಿಯಾದ ಸಂದರ್ಭದಲ್ಲಿ ತುಳಸಿರಾಮನು ಸುಕೀಲ್ ಕಾಳೆ ಹತ್ಯೆ ಮಾಡಲು ಆದೇಶ ಮಾಡಿದನು, ಹೀಗಾಗಿ ಸುಶೀಲ್ ಕಾಳೆ ಹತ್ಯೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಎಂದು ವಿಜಯಪುರದಲ್ಲಿ ಗುರುವಾರ ಸಾಯಂಕಾಲ 5ಗಂಟೆ ಸುಮಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದರು.