ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಚಳ್ಳಕೆರೆ ನಗರದ ಆಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೊಟೇಕ್ ಮಹೇಂದ್ರ ಬ್ಯಾಂಕ್, ವೀರಶೈವ ಸಹಕಾರ ಸಂಘ ಸೇರಿ ಹಲವು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಹಲವು ಬ್ಯಾಂಕ್ ಲಾಕರ್ ಗಳನ್ನ ಓಪನ್ ಮಾಡಿರುವ ಇಡಿ ಅಧಿಕಾರಿಗಳು, ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಅಪಾರ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಇನ್ನೂ ಬ್ಯಾಂಕ್ ಲಾಕರ್ ಗೋಲ್ಡ್ ಕಂಡು ಇಡಿ ಅಧಿಕಾರಿಗಳ ಟೀಂ ಶಾಕ್ ಆಗಿದೆ. ಇನ್ನೂ ಕೂಡಾ ಕೆಲ ಲಾಕರ್ ಓಪನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಬೆಂಗಳೂರಿಂದ ಆಗಮಿಸಿದ್ದ ಹತ್ತಕ್ಕೂ ಹೆಚ್ಚು ಇಡಿ ಅಧಿಕಾರಿಗಳ ಟೀಂ ತಲಾಶ್ ನಡೆಸಿದೆ.