ಕುವೆಂಪು ಹುಟ್ಟಿದ ನಾಡಿನಲ್ಲಿ ಈ ಬಾರಿ ತೀರ್ಥಹಳ್ಳಿ ಠಾಣೆಯ ಪೊಲೀಸರು ಭಾವೈಕ್ಯತೆ ಸಾರಿದ್ದಾರೆ. ಮೂರು ವರ್ಷಗಳಿಂದ ಪೊಲೀಸ್ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಈ ಬಾರಿಯೂ ಕೂಡ ಗಣಪತಿಯನ್ನ ಅತ್ಯಂತ ಶ್ರದ್ಧಾ ಭಕ್ತಿಯಿಂದ ಪ್ರತಿಷ್ಠಾಪನೆ ಮಾಡಲಾಗಿತ್ತು ಮೂರನೇ ದಿನವಾದ ಇಂದು ಗಣಪತಿಯ ವಿಸರ್ಜನೆ ಅದ್ದೂರಿಯಾಗಿ ಮಾಡಲಾಗುತ್ತಿದೆ.ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅದರಲ್ಲೂ ವಿಶೇಷವಾಗಿ ಕುವೆಂಪು ಹುಟ್ಟಿದ ತವರಲ್ಲಿ ಪ್ರತಿಯೊಂದು ಧರ್ಮದ ಆಚಾರ ವಿಚಾರಗಳನ್ನು ಗೌರವಿಸಬೇಕು ಎಂಬಂತಿತ್ತು ಚಂಡೆ ಹಾಗೂ ನಾಸಿಕ್ ಬ್ಯಾಂಡ್ ಗೆ ಸಿಪಿಐ ಇಮ್ರಾನ್ ಬೇಗ್ ಮಾಡಿದ ಡ್ಯಾನ್ಸ್.