ತಾಲೂಕಿನ ಹುಣಸಿಹಾಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯತಿ ನಿರ್ಮಿಸಿದ ತೆರೆದ ಹೊಂಡ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಶಾಲೆಯ ಆವರಣದಲ್ಲಿ ಯಾವುದೆ ಪ್ರಯೋಜನಕ್ಕೆ ಬಾರದ ತೆರೆದ ಹೊಂಡ ಮಕ್ಕಳ ಜೀವಕ್ಕೆ ಕುತ್ತು ತರಲಿದೆ. ಕೂಡಲೇ ಅಪ್ರಯೋಜಕ ಹೊಂಡ ಮುಚ್ಚಬೇಕು ಎಂದು ಸ್ಥಳೀಯರಾದ ತಿಮ್ಮಪ್ಪ ಒತ್ತಾಯಿಸಿದ್ದಾರೆ. ಈ ಕುರಿತು ಸೆ.7 ರ ರವಿವಾರ ಪ್ರಕಟಣೆ ನೀಡಿದ ಅವರು, ಶಾಲೆಗೆ ಬಳಕೆಗೆ ಬಾರದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದನ್ನು ತೆರವುಗೊಳಿಸಬೇಕು. ಐದಾರು ಅಡಿ ಆಳವಿರಿವ ಹೊಂಡ ತೆರೆದಿದೆ. ಆವರಣದಲ್ಲಿ ಆಟವಾಡುವ ಶಾಲಾ ಮಕ್ಕಳು ಹಲವಾರು ಬಾರಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಉದಾಹರಣೆಗಳಿವೆ. ಹೀಗಾಗಿ ಕೂಡಲೇ ತೆರವುಗೊಳಿಸಲು ಒತ್ತಾಯಿಸಿದ್ದಾರೆ