ದಾಂಡೇಲಿ : ಕೇಣಿಯಲ್ಲಿ ಜೆ.ಎಸ್.ಡಬ್ಲ್ಯೂ ಕಂಪನಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಪರಿಸರ ಅನುಮತಿ ಪಡೆಯಲು ಶುಕ್ರವಾರ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು ಸಭೆಯ ಸಂದರ್ಭದಲ್ಲಿ, ಸ್ಥಳೀಯ ಹಾಲಕ್ಕಿ ಸಮುದಾಯದವರು ಹಾಗೂ ಮೀನುಗಾರರು ಮತ್ತು ರೈತರ ಪರವಾಗಿ ಆಹವಾಲು ಸಲ್ಲಿಸಲು ಹೋದಾಗ ಆಹವಾಲು ಸಲ್ಲಿಸಲು ಅವಕಾಶ ನೀಡದೇ ದಬ್ಬಾಳಿಕೆ ನಡೆಸಿರುವುದನ್ನು ತೀವ್ರ ಖಂಡಿಸಿ, ದಬ್ಬಾಳಿಕೆ ನಡೆಸಿದವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರೀನ್ ಇಂಡಿಯಾ ಸಂಸ್ಥೆ, ಪರಿಸರ ಸಂರಕ್ಷಣಾ ಸಂಸ್ಥೆ, ಜಿಲ್ಲಾ ಬುಡಕಟ್ಟು ಕುಣಬಿ ಸಮಾಜ ಮತ್ತು ಸಿದ್ಧಿ ಬುಡಕಟ್ಟು ಸಮಾಜ ಸಂಘಟನೆಯ ಪ್ರಮುಖರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದರು.