ಗಣೇಶ ಹಬ್ಬದಲ್ಲಿ ಗಣೇಶನ ವಿಸರ್ಜನೆ ಮೆರವಣಿಗೆಗೆ ಡಿಜೆ ಬಳಸೋದು ಕಾಮನ್ ಆಗಿದೆ. ಆದ್ರೆ ವಿಜಯಪುರದ ಜೋರಾಪೂರ ಪೇಟೆಯ ಸಿದ್ಧಿ ಗಜಾನನ ಮಂಡಳ ಮಾತ್ರ ಡಿಪ್ರೆಂಟ್ ಆಗಿಯೇ ಗಣೇಶನಿಗೆ ಬೀಳ್ಕೋಡುಗೆ ನೀಡಿದೆ. ತಲೆ ಚಿಟ್ ಹಿಡಿಸೋ ಡಿಜೆ ಬದಲಿಗೆ ದೇಶಿ ಸಂಸ್ಕೃತಿಯನ್ನ ಬಿಂಬಿಸುವ ನೃತ್ಯ, ವಾದ್ಯಗಳ ಮೂಲಕ ಗಣೇಶನಿಗೆ ಬೀಳ್ಕೊಡುಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಮಹಿಳಾ ಸಂಘಗಳ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಸೇರಿ ಸ್ವತಃ ತಾವೇ ಬಾರಿಸಿದರು