ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿಯ ಬೋರುಕ ಪವರ್ ಪ್ಲಾಂಟ್ ಬಳಿಯ ಕಾಲುವೆಯಲ್ಲಿ ಮಂಗಳವಾರ ಸಂಜೆ ಪರಿಚಿತ ವ್ಯಕ್ತಿಯ ರುಂಡವಿಲ್ಲದ ಶವ ಒಂದು ಕೈ ಮತ್ತು ಕಾಲುಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬುಧವಾರ ಬೆಳಗ್ಗೆ ವ್ಯಕ್ತಿ ಯಾರು ಎನ್ನುವುದು ಗೊತ್ತಾಗಿದ್ದು ವ್ಯಕ್ತಿಯನ್ನು ಮದಲಿಂದನಾಳ ಗ್ರಾಮದ ಭೀಮಣ್ಣ ಎಂದು ತಿಳಿದುಬಂದಿದೆ. ಬುದುವಾರ ನಾರಾಯಣಪುರ ಠಾಣೆಗೆ ದೂರು ನೀಡಿದ್ದು ಮೃತನ ತಾಯಿ ತನ್ನ ಮಗನನ್ನು ಯಾರೋ ಕೊಲೆ ಮಾಡಿದ್ದು ಪತ್ತೆ ಹಚ್ಚುವಂತೆ ದೂರಿನಲ್ಲಿ ತಿಳಿಸಿ ಸಲ್ಲಿಸಿದ್ದಾರೆ ಈ ಕುರಿತು ಪ್ರಕರಣ ದಾಖಲಾಗಿದೆ.