ಕದ್ರಾ, ಮಲ್ಲಾಪುರದಲ್ಲಿರುವ ಲಕ್ಷ್ಮಣನಗರದ ನವೀನ್ ಅವರ ಮನೆಯಲ್ಲಿ ಸುಮಾರು 4 ಅಡಿ ಉದ್ದದ ನಾಗರ ಹಾವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳಾದ ಬಿಲಾಲ್ ಶೇಖ್ ಮತ್ತು ರಾಯಪ್ಪ ಅವರು ಸೇರಿ ರವಿವಾರ ಸಂಜೆ 5ಕ್ಕೆ ರಕ್ಷಣೆ ಮಾಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಹಾವು ಬಂದು ಸೇರಿಕೊಂಡಿದ್ದರಿಂದ ಅದರ ಹುಡುಕಾಟಕ್ಕೆ ಸಾಕಷ್ಟು ಹರಸಾಹಸ ಪಡಬೇಕಾಯಿತು. ಸಾಕಷ್ಟು ಹೊತ್ತಿನ ಬಳಿಕ ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಲ್ಲಿ ಯಶಸ್ವಿಯಾದರು.