ಡಿಜಿಟಲ್ ವ್ಯಸನವು ಈ ಕಾಲದ ಹೊಸ ಸಾಂಕ್ರಾಮಿಕ ರೋಗವಾಗಿದೆ. ಸಾಮಾಜಿಕ ಜಾಲತಾಣಗಳ ಅನಿಯಂತ್ರಿತ ಬಳಕೆಯು ಒಂದು ವ್ಯಸನದಂತೆ ಮಕ್ಕಳು, ಪೋಷಕರು, ಯುವಜನರನ್ನು ಕಾಡುತ್ತಿದೆ. ಹಲವರಿಗೆ ಇದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆ ಕುರಿತು ಹೆಚ್ಚು ಎಚ್ಚರ ಇರಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಕಿವಿಮಾತು ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ 'ಅಷ್ಟಾವಕ್ರಗೀತೆ' ಉಪನ್ಯಾಸ ಸರಣಿ ಮುಂದುವರಿಸಿದ ಅವರು, ಪ್ರಾಸಂಗಿಕವಾಗಿ ಸಾಮಾಜಿಕ ಮಾಧ್ಯಮದ ಅಪಾಯಗಳ ಕುರಿತು ಪ್ರಸ್ತಾಪಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಬೇಕಾದ್ದು ಮತ್ತು ಬೇಡದ್ದು -ಎರಡೂ ಥರದ ವಿಚಾರಗಳು ಇರುತ್ತವೆ.