ನಾವಿರುವುದೇ ನಿಮ್ಮ ರಕ್ಷಣೆಗಾಗಿ ಅಪರಿಚಿತರನ್ನು ನಂಬಿ ಕೆಡದಿರಿ. ಸಂಶಯಾಸ್ಪದ ವ್ಯಕ್ತಿಗಳು ಕಂಡರೆ ಗಮನಕ್ಕೆ ತಂದಲ್ಲಿ ಅಂಥವರ ವಿರುದ್ಧ ಖಂಡಿತ ಕ್ರಮ ಜರುಗಿಸಿ ಜನರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಪಿಎಸ್ಐ ನಂದಿನಿ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ ಗುಂಟಿ ನಿರ್ದೇಶನ ಮೇರೆಗೆ ಪಿಎಸ್ಐ ನಂದಿನಿ ಅವರು ಮನ್ನಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ 11ಕ್ಕೆ ಓಣಿಯೊಂದರಲ್ಲಿ ಮಹಿಳೆಯರನ್ನು ಸೇರಿಸಿ ಸಲಹೆ ನೀಡಿದರು.