ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ JSW ಸಂಸ್ಥೆ ಅಳವಡಿಸಿದ್ದ ಪ್ಲಾಸ್ಟಿಕ್ ರೋಡ್ ಡಿವೈಡರ್ಸ್‌ಗಳು ಮಳೆ ನೀರಿನ ಹೊಳೆಗೇರಿಕೊಂಡು ಕೊಚ್ಚಿಹೋಗಿವೆ.ಈ ಘಟನೆಗೆ ಸಂಬಂಧಿಸಿದ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸೆಪ್ಟೆಂಬರ್ 11, ಗುರುವಾರ ಮಧ್ಯಾಹ್ನ 2 ಗಂಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಳೆಯ ತೀವ್ರತೆಗೆ ತಾತ್ಕಾಲಿಕ ಮೂಲಸೌಕರ್ಯಗಳು ಹೇಗೆ ಅಸ್ತವ್ಯಸ್ತವಾಗುತ್ತವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.