ಶಿಡ್ಲಘಟ್ಟದ ವಿಶ್ವಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಸೆಪ್ಟೆಂಬರ್ 15ರ ಸೋಮವಾರ 11 ಗಂಟೆಗೆ ತಾಲ್ಲೂಕು ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿಯನ್ನು ವಿಎಚ್ ಪಿ ಮತ್ತು ಭಜರಂಗದಳದ ಮುಖಂಡರು ಶನಿವಾರ ಮಾಹಿತಿ ನೀಡಿದರು. ಹಾಗಾಗಿ ತಾಲ್ಲೂಕಿನ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಭಜರಂಗದಳದ ತಾಲೂಕು ಅಧ್ಯಕ್ಷ ಚೆಲುವರಾಯ ತಿಳಿಸಿದರು.