ಶ್ರೀ ಗಣೇಶ ಉತ್ಸವದ ನಿಮಿತ್ಯ ಭಾರಿ ವಾಹನಗಳ ಸಂಚಾರವನ್ನು ಮಾರ್ಗ ಬದಲಾವಣೆಗಾಗಿ ಇಂದು ಸೋಮವಾರ 8 ಗಂಟೆಗೆ ಪತ್ರಿಕಾ ಪ್ರಕಟಣೆ ಮೂಲಕ ಬೆಳಗಾವಿ ನಗರದಲ್ಲಿ ಪೊಲೀಸ್ ಆಯುಕ್ತ ಭೂಷನ್ ಬೊರಸೆ ಅವರು ಆದೇಶ ಹೊರಡಿಸಿದ್ದು ಬೆಳಗಾವಿ ನಗರದ ಮಿಲಿಟರಿ ಮಹಾದೇವ ಮಂದಿರ ಹತ್ತಿರದ ರಸ್ತೆ, ಗ್ಲೋಬ್ ಸರ್ಕಲ್ (ಅಲ್ವಾ ಹೊಂಡಾ ಶೋ ರೂಮ್) ಹಾಗೂ ಗಾಂಧಿ ಸರ್ಕಲ್ (ಅರಗನ ತಲಾಬ) ಈ ಸ್ಥಳಗಳಲ್ಲಿ ದಂಡು ಮಂಡಳಿ (ಕಾಂಟೋನೈಂಟ್) ರವರು ಅಳವಡಿಸಲಾಗಿದ್ದ ಹೈಟ್ ಬ್ಯಾರಿಯರ್ ಗಳನ್ನು ತೆರವುಗೊಳಿಸಲಾಗಿದ್ದು, ಭಾರಿ ವಾಹನ ಚಾಲಕರು ಈ ಮಾರ್ಗದಲ್ಲಿ ಸಂಚರಿಸುವಂತೆ ಪ್ರಕಟಣೆ ಹೊರಡಿಸಿದ್ದಾರೆ.