ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಚೆಂಡೂರು ಕ್ರಾಸ್ ಬಳಿ ನೂತನವಾಗಿ ಜಿಯೋ ಪೆಟ್ರೋಲಿಯಂ ಘಟಕ ಸ್ಥಾಪನೆಯಾಗಿದ್ದು ಪೆಟ್ರೋಲ್ ಬಂಕ್ ಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಪಕ್ಕದಲ್ಲಿ ಇರುವ ದಲಿತರ ಜಮೀನಿನಲ್ಲಿ ಸರ್ವಿಸ್ ರಸ್ತೆ ಮಾಡತ್ತಿರುವುದನ್ನು ಕಂಡಿಸಿ ರೈತರು ಮತ್ತು ದಲಿತ ಸಂಘಟನೆಗಳು ಪೆಟ್ರೋಲ್ ಬಂಕ್ ವಿರುದ್ದ ಪ್ರತಿಭಟನೆ ಮಾಡಿದರು.ತಾಲ್ಲೂಕಿನ ಯರ್ರಲಕ್ಕೇನಹಳ್ಳಿ ಸರ್ವೆ ನಂ. 146/1 ರಲ್ಲಿ 1.27 ಕುಂಟೆ ಜಮೀನು ವೆಂಕಟಮ್ಮ ರವರಿಗೆ ಸೇರಿದ್ದು ಇದರಲ್ಲಿ ಜಿಯೋ ಪೆಟ್ರೋಲಿಯಂ ಸಂಸ್ಥೆಯವರು ದಲಿತರಿಗೆ ಸೇರಿದ ಜಮೀನಿನಲ್ಲಿ ಸರ್ವಿಸ್ ರಸ್ತೆ ಮಾಡಲು ಮುಂದಾಗಿರುವುದು ಬಡ ಹಾಗೂ ದಲಿತರಿಗೆ ಅನ್ಯಾಯಮಾಡುತ್ತಿದ್ದಾರೆ. ನ್ಯಾಯಕ್ಕಾಗಿ ದಲಿತ ಸಂಘಟನೆಗಳ ಬೆಂಬಲ ಪಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ.