ಕಲಬುರಗಿ : ಬೀರಲಿಂಗೇಶ್ವರ ದೇವಸ್ಥಾನದ ಪೂಜೆ ಹಾಗೂ ದುಡ್ಡಿನ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ನಡುರಸ್ತೆಯಲ್ಲೆ ಹೊಡೆದಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಅವರಾದ್ ಗ್ರಾಮದ ಬಳಿ ನಡೆದಿದ್ದು, ಸೆ11 ರಂದು ರಾತ್ರಿ 10 ಗಂಟೆಗೆ ವಿಡಿಯೋ ಲಭ್ಯವಾಗಿದೆ. ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದ ಶಿವಲಿಂಗಪ್ಪ ಪೂಜಾರಿ ಮತ್ತು ಮಾಳಪ್ಪ ಶಿವಗೊಂಡ ಕುಟುಂಬದ ಮಧ್ಯೆ ನಡುರಸ್ತೆಯಲ್ಲೆ ಹೊಡೆದಾಟ ನಡೆದಿದ್ದು, ಚಪ್ಪಲಿಯಿಂದ ಸಹ ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗದ ಹಿನ್ನಲೆಯಲ್ಲಿ ಜೇವರ್ಗಿ ಪೊಲೀಸರು ಸ್ವಯಂಚಾಲಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.