ರಾಜ್ಯ ಬಜೆಟ್ ಎಂಬುದು ರಾಜ್ಯದ ವಾರ್ಷಿಕ ಆಯವ್ಯಯದ ಲೆಕ್ಕಾಚಾರವಾಗಿದೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತೀ ಆರ್ಥಿಕ ವರ್ಷದಲ್ಲಿ ತನ್ನ ಬಜೆಟ್ ಮಂಡಿಸುತ್ತಿದೆ, ದೇಶದ ಆರ್ಥಿಕತೆಯಲ್ಲಿ ದೊಡ್ಡ ಪಾತ್ರ ವಹಿಸುವ ಕರ್ನಾಟಕ ರಾಜ್ಯವು ದೇಶದ ಜಿಡಿಪಿಯಲ್ಲಿ ಮೂರನೇ ಸ್ಥಾನದಲ್ಲಿದೆ ಕಳೆದ ವರ್ಷ ಕರ್ನಾಟಕ ಸರಕಾರವು ಮಂಡಿಸಿದ ವಾರ್ಷಿಕ ಬಜೆಟ್ ಕೇಂದ್ರ ಸರಕಾರದ ಬಜೆಟ್ ಮೊತ್ತದ ಶೇಕಡಾ ಏಳರಷ್ಟಿದೆ ಅಂದರೆ ಕಳೆದ ವರ್ಷ ರಾಜ್ಯ ಸರಕಾರವು 3 ಲಕ್ಷ 71 ಸಾವಿರ ಕೋಟಿ ರೂಪಾಯಿಗಳ ಗಾತ್ರದ ಆಯವ್ಯಯವನ್ನು ಮಂಡಿಸಿದೆ ಬಜೆಟ್ ಮಂಡಿಸುವಾಗ ಎಲ್ಲಾ ಇಲಾಖೆಗಳಿಗೆ ಸೂಕ್ತ ಅನುದಾನ, ಹೊಸ ಜನ ಕಲ್ಯಾಣ ಯೋಜನೆ, ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯಕ್ಕೆ, ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚು ಅನುದಾನ ನೀಡಬೇಕೆಂದ್ರು