ರಾಜ್ಯ ಸರಕಾರದ ಅಧಿಕೃತ ಕೆಲಸಗಳಿಗೆ ವಿಮಾನ ಹಾಗೂ ಹೆಲಿಕಾಪ್ಟರ್ ಬಳಕೆ ಸ್ವರೂಪ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಚಿವರಾದ ಕೆ ಜೆ ಜಾರ್ಜ್, ಬೈರತಿ ಸುರೇಶ್ ಹಾಗೂ ಅಧಿಕಾರಿಗಳ ಜತೆ ವಿಧಾನಸೌಧದಲ್ಲಿ ಸೋಮವಾರ ಮಧ್ಯಾಹ್ನ 1:30 ರ ಸುಮಾರಿಗೆ ಸಮಾಲೋಚನೆ ನಡೆಸಿದರು. ಸರ್ಕಾರದ ಕೆಲಸಗಳಿಗೆ ವಿಮಾನ ಹಾಗೂ ಹೆಲಿಕ್ಯಾಪ್ಟರ್ ಬಳಕೆ ಮಾಡಬೇಕಾ ? ಅಥವಾ ಬೇಡವಾ ? ಹಾಗೂ ಯಾವ ಹಂತದ ಅಧಿಕಾರಿಗಳು ಇದನ್ನ ಬಳಸಬೇಕು ಎಂಬ ವಿಚಾರಗಳಿಗೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಚಿವರ ಜೊತೆ ಚರ್ಚೆ ನಡೆಸಿದರು.