ದಾಂಡೇಲಿ : ಇನ್ನೇನು ಚೌತಿಗೆ ಎರಡು ದಿನ ಉಳಿಯಿತು. ಹೀಗೆ ಬಿಟ್ಟರೆ ಚೌತಿಯ ಸಂದರ್ಭದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಗಣಪನನ್ನು ಇಂತಹ ರಸ್ತೆಯಲ್ಲಿ ತೆಗೆದುಕೊಂಡು ಬಂದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಕಷ್ಟ ಸಾಧ್ಯ. ಯಾಕೆ ಗೊತ್ತಾ, ಈ ರಸ್ತೆಯಲ್ಲಿ ಬಂದರೆ ಗಣಪತಿ ಮೂರ್ತಿಯ ಕೈ, ಸೊಂಡಿಲು ಮುರಿಯುವುದು ಖಚಿತ ಎಂಬಷ್ಟರ ಮಟ್ಟಿಗೆ ರಸ್ತೆಯಲ್ಲಿ ಹೊಂಡ ಗುಂಡಿಗಳಿವೆ. ಹಾಗಾಗಿಯೇ ಹಿಂದೂ ಧರ್ಮೀಯರ ಸಂಭ್ರಮ ಸಡಗರದ ಹಬ್ಬವಾದ ಚೌತಿ ಹಬ್ಬಕ್ಕೆ ರಸ್ತೆ ವಿಘ್ನ ತರದೇ ಇರಲಿಯೆಂದು ಸ್ಥಳೀಯ ಶ್ರೀ ಗಣೇಶ ಗೆಳೆಯರ ಬಳಗದ ವತಿಯಿಂದ ರಸ್ತೆಯಲ್ಲಿರುವ ಹೊಂಡ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚುವ ಕಾರ್ಯಕ್ಕೆ ಇಂದು ಭಾನುವಾರ ಬೆಳಿಗ್ಗೆ 9:30 ಗಂಟೆ ಸುಮಾರಿಗೆ ಚಾಲನೆ ನೀಡಲಾಯಿತು.