Download Now Banner

This browser does not support the video element.

ದಾಂಡೇಲಿ: ಕಾರ್ಮಿಕ ಭವನದ ವ್ಯಾಪಾರಿ ಮಳಿಗೆಗಳನ್ನು ಸಾರ್ವಜನಿಕರಿಗೆ ಬಾಡಿಗೆಗೆ ನೀಡಲು ತ್ವರಿತ ಕ್ರಮ ಕೈಗೊಳ್ಳುವಂತೆ ದಾಂಡೇಲಿ ಕಾರ್ಮಿಕರ ಸಂಘದಿಂದ ಮನವಿ

Dandeli, Uttara Kannada | Aug 26, 2025
ದಾಂಡೇಲಿ : ನಗರದ ಕಾರ್ಮಿಕ ಭವನದ ವ್ಯಾಪಾರಿ ಮಳಿಗೆಗಳನ್ನು ಸಾರ್ವಜನಿಕರಿಗೆ ಬಾಡಿಗೆಗೆ ನೀಡಲು ತ್ವರಿತ ಕ್ರಮ ಕೈಗೊಳ್ಳುವಂತೆ ದಾಂಡೇಲಿ ಕಾರ್ಮಿಕರ ಸಂಘದಿಂದ ಕಾರ್ಮಿಕ ಇಲಾಖೆಯ ಆಯುಕ್ತರಿಗೆ ಬರೆದ ಮನವಿಯನ್ನು ಮಂಗಳವಾರ ಸಂಜೆ 4:00 ಗಂಟೆ ಸುಮಾರಿಗೆ ಕಾರ್ಮಿಕ ಅಧಿಕಾರಿಯವರ‌ ಮೂಲಕ ನೀಡಲಾಯಿತು. ಕಾರ್ಮಿಕ ಆಯುಕ್ತರಿಗೆ ಬರೆದ ಮನವಿಯಲ್ಲಿ ಕಾರ್ಮಿಕ ಭವನ ನಿರ್ಮಾಣವಾಗಿ 2022ರ ಡಿಸೆಂಬರ್ 5 ರಂದು ಉದ್ಘಾಟನೆಗೊಂಡರೂ, ಇದೇ ಕಾರ್ಮಿಕ ಭವನದ ಕಟ್ಟಡದಲ್ಲಿ ನಿರ್ಮಾಣಗೊಂಡಿರುವ ವ್ಯಾಪಾರಿ ಮಳಿಗೆಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಈವರೆಗೆ ಬಾಡಿಗೆಗೆ ನೀಡಲಾಗಿರುವುದಿಲ್ಲ. ಇದರಿಂದ ಕಾರ್ಮಿಕ ಇಲಾಖೆಗೂ ನಷ್ಟವಾಗುತ್ತಿದೆ ಎಂದು ಮನವಿಯಲ್ಲಿ‌ ವಿವರಿಸಲಾಗಿದೆ.
Read More News
T & CPrivacy PolicyContact Us