Download Now Banner

This browser does not support the video element.

ಚಾಮರಾಜನಗರ: ಸ್ವಂತ ವೆಚ್ಚದಲ್ಲಿ ನಗರದಲ್ಲಿ ಜೀಬ್ರಾ ಕ್ರಾಸಿಂಗ್ ಬರೆಸಿದ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ – ಸಾರ್ವಜನಿಕರ ಮೆಚ್ಚುಗೆ

Chamarajanagar, Chamarajnagar | Sep 5, 2025
ಚಾಮರಾಜನಗರ ನಗರದ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಹನುಮಂತ ಉಪ್ಪಾರ್ ರವರು ತಮ್ಮ ಸ್ವಂತ ವೆಚ್ಚದಲ್ಲಿ ನಗರದ ಮೂರು ಪ್ರಮುಖ ವೃತ್ತಗಳಲ್ಲಿ ಜೀಬ್ರಾ ಕ್ರಾಸಿಂಗ್ ಲೈನ್‌ಗಳನ್ನು ಬರೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಅಂದಾಜು ₹50,000 ವೆಚ್ಚದಲ್ಲು ಈ ಮಹತ್ವದ ಕೆಲಸವನ್ನು ಮಾಡಿ ನಗರದಲ್ಲಿ ವಾಹನಗಳ ನಿರ್ವಿಘ್ನ ಸಂಚಾರ ಮತ್ತು ಪಾದಚಾರಿಗಳ ಸುರಕ್ಷಿತ ದಾಟುವಿಗೆ ಸಹಕಾರಿಯಾಗಲೆಂದು ಕೈಗೊಂಡಿದ್ದಾರೆ ಅವರು ಜೀಬ್ರಾ ಲೈನ್‌ಗಳನ್ನು ಭುವನೇಶ್ವರಿ ವೃತ್ತ, ಸುಲ್ತಾನ್ ಷರೀಫ್ ಸರ್ಕಲ್, ಮತ್ತು ಸಂತೇಮರಹಳ್ಳಿ ಸರ್ಕಲ್‌ಗಳಲ್ಲಿ ಬರೆಸಿದ್ದಾರೆ. ಇವರ ಈ ಸಾಮಾಜಿಕ ಜವಾಬ್ದಾರಿಯ ಮನೋಭಾವ ಸಾರ್ವಜನಿಕರಿಂದ ಹರ್ಷದ ಸ್ವಾಗತಕ್ಕೆ ಪಾತ್ರವಾಗಿದೆ.
Read More News
T & CPrivacy PolicyContact Us