ರಾಜ್ಯ ಸರಕಾರವು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಧ್ವನಿ ವರ್ಧಕ ಬಳಿಕೆ ಮಾಡುವುದು ನಿಷೇಧ ಮಾಡಿದ್ದು ಈ ಆದೇಶ ಪಡೆಯುವಂತೆ ಒತ್ತಾಯಿಸಿ ನಗರದಲ್ಲಿ ಪೊಲೀಸ್ ಇಲಾಖೆಗೆ ಬಜರಂಗದಳದ ಪದಾಧಿಕಾರಿಗಳು ಗುರುವಾರ ಮಧ್ಯಾಹ್ನ 2ಕ್ಕೆ ಮನವಿ ಸಲ್ಲಿಸಿ ಒತ್ತಾಯ ಮಾಡಿದ್ದಾರೆ. ಉತ್ಸವಗಳನ್ನು ನಂಬಿ ಧ್ವನಿ ಮಾಲೀಕರು ಲಕ್ಷಾಂತರ ರೂ. ಸಾಲ ಮಾಡಿ, ಡಿಜೆಯ ವ್ಯವಹಾರಕ್ಕೆ ಹೂಡಿಕೆ ಮಾಡಿದ್ದಾರೆ. ಆದರೆ ಸರಕಾರ ಧ್ವನಿ ವರ್ಧಕ ಬಳಕೆ ಮಾಡುವುದನ್ನು ನಿಷೇಧ ಮಾಡಿದ್ದರಿಂದ ಮಾಲೀಕರಿಗೆ ನಷ್ಟ ಉಂಟಾಗುವಂತಾಗಿದೆ. ಸರಕಾರ ಮಾಡಿದ ಆದೇಶ ಹಿಂಪಡೆಯವಂತೆ ಕಾರವಾರ ಬಜರಂಗದಳದ ಪದಾಧಿಕಾರಿಗಳು ಪೊಲೀಸ್ ಇಲಾಖೆ ಮೂಲಕ ಮನವಿ ಮಾಡಿದ್ದಾರೆ.