ಕಲಬುರಗಿ : ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಒಪ್ಪಿಗೆ ನೀಡಿ ಅದನ್ನ ಜಾರಿ ಮಾಡಿರೋದು ಸ್ವಾಗತಾರ್ಹವಾಗಿದ್ದು, ಆದರೆ ದಲಿತರಲ್ಲಿನ ಯಾವುದೇ ಉಪ ಜಾತಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಒಳಮೀಸಲಾತಿ ಜಾರಿ ತರಬೇಕೆಂದು ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಪ್ರಭಾಕರ್ ಹದನೂರು ಆಗ್ರಹಿಸಿದ್ದಾರೆ.. ಆ22 ರಂದು ಬೆಳಗ್ಗೆ 10.30 ಕ್ಕೆ ನಗರದಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗಾಗಿ ಮಾದಿಗ ದಂಡೋರ ಹೋರಾಟ ಸಮಿತಿ ಹುಟ್ಟುಹಾಕಲಾಗಿತ್ತು.. ಅಂದಿನಿಂದ ಇಂದಿನವರೆಗೆ ಒಳಮೀಸಲಾತಿಗಾಗಿ ನಾವು ಹೋರಾಟ ಮಾಡುತ್ತಲೆ ಬಂದಿರೋದಾಗಿ ಪ್ರಭಾಕರ್ ಹದನೂರು ಹೇಳಿದ್ದಾರೆ.