ನಗರದ ಎಲ್. ಬಿ. ಎಸ್. ನಗರದ ಅಲಿ ಕಾಲೋನಿ ಮಕ್ಕ ಮಸ್ಜಿದ್ ಎದುರುಗಡೆ ಇರುವ ಮನೆಯೊಂದರ ಮುಂದೆ ನಿಲ್ಲಿಸಿದ್ದ ಎರಡು ಬೈಕ್ ಗಳಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಗಸ್ಟ್ 29 ರ ಶುಕ್ರವಾರ ತಡರಾತ್ರಿ 11.57 ಕ್ಕೆ ಈ ಅವಘಡ ನಡೆದಿದ್ದು, ಲಾತಿಫ್ ಅಹ್ಮದ್, ಶಬ್ಬೀರ್ ಅಹ್ಮದ್ ಎಂಬುವವರ ಎರಡು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ದುಷ್ಕರ್ಮಿ ಅಲ್ಲಿಂದ ಓಡಿ ಹೋಗಿದ್ದಾನೆ. ಬೆಂಕಿ ಹೊತ್ತಿ ಉರಿದಿದ್ದನ್ನು ಗಮನಿಸಿದ ಮನೆಯವರು ಹೊರಗೆ ಓಡಿ ಬಂದು ಬೆಂಕಿ ನಂದಿಸಲು ಹರಸಾಹಸಪಟ್ಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.