ದಾರಿಯಲ್ಲಿ ಹೋಗುವ ವೇಳೆ ಬಿದ್ದಿದ್ದ ಒಂದು ತೆಂಗಿನಕಾಯಿ ಮುಟ್ಟಿದ್ದಕ್ಕೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಸ್ ಬಿದರೆ ಗ್ರಾಮದಲ್ಲಿ ನಡೆದಿದೆ. ಕುಮಾರ್ ಎಂಬಾತನ ಮೇಲೆ ಚಂದ್ರಪ್ಪ ಹಾಗೂ ಆತನ ಅಳಿಯ ಮಧು ಎಂಬುವವರು ಅಲ್ಲೇ ನಡೆಸಿದ್ದು, ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರು ಕೂಡ ಕುಮಾರನನ್ನು ಹಳ್ಳಕ್ಕೆ ಎಸೆದು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು. ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.