ಸುರಪುರ ಹುನಗುಂದ ರಾಜ್ಯ ಹೆದ್ದಾರಿ ಮಾಲಗತ್ತಿ ಗ್ರಾಮದಲ್ಲಿ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ದುರಸ್ತಿಗೊಳಿಸುವಂತೆ ದಲಿತ ಸಂಘಟನಾ ಸೇನೆಯ ತಾಲೂಕ ಸಂಚಾಲಕ ಬಸವರಾಜ ಕಂಬಾರ ಒತ್ತಾಯಿಸಿದ್ದಾರೆ. ಗುರುವಾರ ಮಧ್ಯಾಹ್ನ ಮಾಲಗತ್ತಿ ಗ್ರಾಮದಲ್ಲಿ ಮಾತನಾಡಿ, ರಸ್ತೆ ಹದಗೆಟ್ಟಿದ್ದರಿಂದ ಅನೇಕ ಬೈಕುಗಳು ಅಪಘಾತಗೊಂಡಿವೆ,ವಾಹನಗಳ ಓಡಾಟಕ್ಕೆ ತುಂಬಾ ತೊಂದರೆ ಉಂಟಾಗುತ್ತಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಲೋಕೋಪಯೋಗಿ ಇಲಾಖೆ ಎಇಇ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡರು ಭಾಗವಹಿಸಿದ್ದರು.