ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಭಾನುವಾರ ನಡೆದಿದ್ದ ಕುರಿ ಮಾರಾಟ ಸಂತೆಯಲ್ಲಿ ಹೊನಕುಂಟಿ ಗ್ರಾಮದ ಬಸವರಾಜ್ ಎನ್ನುವ ವ್ಯಕ್ತಿಗೆ ಸೇರಿದ ಎರಡು ಕುರಿಗಳನ್ನು ಖರೀದಿ ಮಾಡುವ ನೆಪ ಮಾಡಿಕೊಂಡ ಕಳ್ಳನೊಬ್ಬ ಕುರಿಗಳನ್ನು ತೆಗೆದುಕೊಂಡು ಹಣ ಕೊಡದೆ ಹಾಗೆ ಪರಾರಿಯಾಗಿರುವ ಘಟನೆಯ ಕುರಿತು ಆರೋಪ ಕೇಳಿ ಬಂದಿತ್ತು. ಘಟನೆಯ ದೃಶ್ಯ ಬುದುವಾರ ಬೆಳಗ್ಗೆ ಕುರಿ ಸಂತೆ ನಡೆಯುವ ಸ್ಥಳದ ರಸ್ತೆಯಲ್ಲಿನ ಸಿಸಿಟಿವಿ ಒಂದರಲ್ಲಿ ಸರಿಯಾಗಿದ್ದು ಆ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಮುದ್ಗಲ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.