ಪಾರ್ಕ್ ನಲ್ಲಿ ಹೋಟೆಲ್, ಕೈಗಾರಿಕಾ ತ್ಯಾಜ್ಯ ಡಂಪ್: ಗಬ್ಬೆದ್ದು ನಾರುತ್ತಿರುವ ಓಬ್ದೇನಹಳ್ಳಿ, ಗುಡ್ಡದಹಳ್ಳಿ ಸುತ್ತುಮುತ್ತ ಪ್ರದೇಶ: ಪ್ರಶ್ನೆ ಮಾಡಲು ಹೋದವರ ಮೇಲೆ ದರ್ಪ ಪಾರ್ಕಿಗೆಂದು ನಿಗದಿ ಪಡಿಸಿರುವ ಸ್ಥಳದಲ್ಲಿ ಯಾರೂ ಇಲ್ಲದ ಸಮಯದಲ್ಲಿ ರಾತ್ರೋರಾತ್ರಿ ಐದಾರು ಅಡಿ ಗುಂಡಿ ತೋಡಿ ಟ್ರ್ಯಾಕ್ಟರ್ ಮೂಲಕ ಹೋಟೆಲ್, ಕೈಗಾರಿಕಾ ತ್ಯಾಜ್ಯವನ್ನು ತಂದು ಡಂಪ್ ಮಾಡಿ ಗುಂಡಿ ತುಂಬಿದ ಮೇಲೆ ಮಣ್ಣಾಕಿ ಮುಚ್ಚುತ್ತಿರುವ ಕೃತ್ಯ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ದೇವನಹಳ್ಳಿಯ ಆಲೂರು ದುದ್ದನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗಡಿ ಭಾಗದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಕಂಡುಬಂದಿದೆ.....