ಕಲಿಗಾಲದಲ್ಲಿ ದೇವರನ್ನು ಬಿಡದ ಕಳ್ಳರು ರಾತ್ರೋ ರಾತ್ರಿ ಗಣೇಶನ ಮೂರ್ತಿ ಹೊತ್ತೊಯ್ದ ಘಟನೆ ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜರುಗಿದ್ದು ತಡವಾಗಿ ವರದಿಯಾಗಿದೆ. ಸೋಮವಾರ ಸಂಜೆ ಪಟ್ಟಣದಲ್ಲಿ ಈ ಕುರಿತು ಮಾರಾಟಗಾರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ಗಣೇಶನ ಹಬ್ಬಕ್ಕೆಂದು ಮಾರಾಟ ಮಾಡಲು ಇಟ್ಟಿದ್ದ ಗಣೇಶನ ಮೂರ್ತಿಗಳ ಪೈಕಿ ಭಾನುವಾರ ಮದ್ಯರಾತ್ರಿ 15 ಸಾವಿರ ರೂ ಮಾಲ್ಯದ ಗಣೇಶನ ಮೂರ್ತಿ ಕಳವು ಮಾಡಲಾಗಿದೆ. ಶ್ರೀನಿವಾಸ್ ಎಂಬುವವರು ಕಳೆದ 40 ವರ್ಷಗಳಿಂದ ಗಣಪತಿ ತಯಾರಿಸಿ ಮಾರಾಟ ಮಾಡುವ ವೃತ್ತಿಯಲ್ಲಿದ್ದಾರೆ. ಗಣಪತಿ ಕಳ್ಳತನವಾಗಿದ್ದಕ್ಕೆ ಮಾಲೀಕ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿ ಗಣಪತಿ ಕದ್ದು ಕೂರಿಸಿ ಸಾಧಿಸುವುದ್ದಾರೇನೆಂದು ಪ್ರಶ್ನಿಸಿದ್ದಾರೆ.