ಸಿ ಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಾಪ ತೋಳೆಯಲು ಪವಿತ್ರ ತುಂಗಭದ್ರಾ ನದಿಯಲ್ಲಿನ ಗಂಗೆಯನ್ನು ತೆಗೆದುಕೊಂಡು ಹೋಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಅಭಿಷೇಕ ಮಾಡಲು ಸಂಕಲ್ಪ ಮಾಡಲಾಗಿದೆ ಅದರಂತೆ ಪವಿತ್ರ ಚಿಂಥಾಮಣಿ ಸ್ಥಳದಲ್ಲಿರುವ ತುಂಗಭದ್ರಾ ನದಿಯಲ್ಲಿನ ಜಲ ಪೂಜೆ ಮಾಡಿ ಗಂಗೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರಡ್ಡಿ ಹೇಳಿದರು. ಆಗಸ್ಟ್ 31 ರಂದು ಬೆಳಗ್ಗೆ 8-30 ಗಂಟೆಗೆ ಆನೆಗುಂದಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ ಬಿಜೆಪಿ ಪಕ್ಷದಿಂದ ಧರ್ಮಸ್ಥಳ ಚಲೊ ಹಿನ್ನೆಲೆ ತುಂಗಭದ್ರಾ ನದಿ ನೀರಿನ ಜೊತೆಗೆ ಧರ್ಮಸ್ಥಳಕ್ಕೆ ತೆರಳಿದರು