ಹಾವೇರಿ ಜಿಲ್ಲೆಯ ಮೊಟೆಬೆನ್ನೂರು ಬಳಿ ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ ನನ್ನ ಭರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ 8 ಗಂಟೆ ವೇಳೆ ಘಟನೆ ನಡೆದಿದ್ದು ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ 40 ವರ್ಷದ ಲಿಂಗೇಶ್ ಹತ್ಯೆಯಾಗಿದ್ದಾರೆ. ಹಾವೇರಿ ಜಿಲ್ಲೆ ಮೊಟೆಬೆನ್ನೂರು ಬಳಿ ಎನ್ ಹೆಚ್ 48 ಫ್ಲೈ ಓವರ್ ಮೇಲೆ ಲಿಂಗೇಶ್ ಶವ ಪತ್ತೆಯಾಗಿದ್ದು ಲಿಂಗೇಶ್ ನನ್ನ ಕತ್ತು ಕೊಯ್ದು ಹತ್ಯೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ.