ಮನೆಯಿಂದ ಹೊರ ಹೋಗಿದ್ದ ವೇಳೆ ಲಾಕರ್ ಹೊಡೆದು ₹ 12.68 ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಚೊಟ್ಟನಹಳ್ಳಿಯಲ್ಲಿ ಜರುಗಿದ್ದು ತಡವಾಗಿ ವರದಿಯಾಗಿದೆ. ಪ್ರಭಾವತಿ ಕೋಂ ಸಿ.ಆರ್.ರಾಜಣ್ಣ ಎಂಬುವವರ ಮನೆಯಲ್ಲಿ ಕೃತ್ಯ ಜರುಗಿದೆ. ಪ್ರಭಾವತಿಯವರು ಅನಾರೋಗ್ಯ ನಿಮಿತ್ತ ಅಸ್ಪತ್ರೆಗೆ ತೆರಳಿದ ವೇಳೆ ಅವರ ಪತಿ ಕೂಡ ತೋಟಕ್ಕೆ ಹೋಗಿದ್ದಾರೆ. ಯಾರು ಇಲ್ಲಸ ಸಮಯ ನೋಡಿ ಮನೆಗೆ ನುಗ್ಗಿ ಲಾಕರ್ ಹೊಡೆದು ಚಿನ್ನಾಭರಣ ದೋಚಲಾಗಿದೆ. 6 ಲಕ್ಷ ರೂ ನಗದು, 45 ಗ್ರಾಂ ಚಿನ್ನದ ಸರ, 22 ಗ್ರಾಂ ಚಿನ್ನದ ನೆಕ್ಲೆಸ್, 8 ಗ್ರಾಂ ಚಿನ್ನದ ಓಲೆ ಸೇರಿ ₹ 12,68,360 ಬೆಲೆ ನಗದು, ಚಿನ್ನಾಭರಣ ಕಾಣೆಯಾಗಿದೆ. ಕಳ್ಳತನಕ್ಕೆ ಸಂಬಂಧಿಯೊಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ಸಲ್ಲಿಸಲಾಗಿದೆ.