ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸೂಕ್ತ ಬಸ್ ಇಲ್ಲದ ಕಾರಣ ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ನಗರದ ಬಸ್ ನಿಲ್ದಾಣದ ಬಳಿ ಸೋಮವಾರ ಸಂಜೆ 5ಕ್ಕೆ ನಡೆದಿದೆ. ಕಾರವಾರ ತಾಲೂಕಿನ ಕೆರವಡಿ, ಮಲ್ಲಾಪುರ ಭಾಗಕ್ಕೆ ತೆರಳುವ ಪ್ರಮಾಣಕರು ಬಸ್ ಇಲ್ಲದೆ ಪರದಾಡುವಂತಾಯಿತು. ಈ ಅವಧಿಯಲ್ಲಿ ಗ್ರಾಮೀಣ ಭಾಗಕ್ಕೆ ಸುಮಾರು 3-4 ಬಸ್ ಗಳು ಸಂಚರಿಸಬೇಕಾಗಿತ್ತು. ಆದರೆ ಮಧ್ಯಾಹ್ನದಿಂದಲೇ ತಮ್ಮ ಮನೆಗೆ ತೆರಳುವವರು ಬಸ್ ನಿಲ್ದಾಣದಲ್ಲೇ ಕಾಯುವಂಥ ಸ್ಥಿತಿ ನಿರ್ಮಾಣಗೊಂಡಿತ್ತು.