ಮನೆ ಮುಂದೆ ನಿಂತ ಚರಂಡಿ ನೀರಿನ ವಿಚಾರವಾಗಿ ಶುರುವಾದ ಗಲಾಟೆಯಲ್ಲಿ, ಮಹಿಳೆಯರು ಜಡೆಯನ್ನು ಹಿಡಿದು ಪರಸ್ಪರ ಬಡಿದಾಡಿಕೊಂಡ ಘಟನೆ ಕೊಪ್ಪಳ ತಾಲೂಕಿನ ಕುಕನಪಲ್ಲಿ ಗ್ರಾಮದಲ್ಲಿ ನಡೆದಿದೆ. ಕುಕನಪಳ್ಳಿ ಗ್ರಾಮದ ಸುಧಾ ದೊಡ್ಡಮನಿ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದ ಸುಧಾ ದೊಡ್ಡಮನಿಯವರು ಮುನಿರಾಬಾದ್ ಪೊಲೀಸ್ ಠಾಣೆಗೆ ತೆರಳಿ ಜಾತಿ ನಿಂದನೆ ಹಾಗೂ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.