ಕಳೆದ ಮೂರು ನಾಲ್ಕು ದಿನಗಳಿಂದಲೂ ಸತತ ಮಳೆಯಾಗಿರುವ ಹಿನ್ನೆಲೆ ಗುಂಡಾಲ್ ಜಲಾಶಯದ ನೀರು ಕಾಲುವೆಯ ಮೂಲಕ ರೈತರ ಜಮೀನುಗಳಿಗೆ ನೀರು ನುಗ್ಗಿದ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಹೊಂಡರಬಾಳು, ಮಧುವನಹಳ್ಳಿ ಹಾಗೂ ಟಿ.ಸಿ ಹುಂಡಿ ಗ್ರಾಮದಲ್ಲಿ ನಡೆದಿದ್ದು ರೈತರು ಆಕ್ರೋಶ ಹೊರಹಾಕಿದ್ದಾರೆ. 70 ಎಕರೆಗೂ ಹೆಚ್ಚು ಜಮೀನುಗಳಿಗೆ ನೀರು ನುಗ್ಗಿದ್ದು ನಾಟಿ ಮಾಡಿದ್ದ ಭತ್ತದ ಪೈರು ಸಂಪೂರ್ಣ ಹಾಳಾಗಿ ರೈತರು ಕಂಗಲಾಗಿದ್ದಾರೆ. ಕಬಿನಿ ಇಲಾಖೆಯ ಅಧಿಕಾರಿಗಳು ನಾಲೆಯನ್ನು ಸ್ವಚ್ಛಪಡಿಸಿಲ್ಲ, ಕೆರೆಗಳ ಹೂಳು ತೆಗೆಸಿಲ್ಲ ಹಾಗಾಗಿ ನಾಲೆಯ ಮೂಲಕ ನೀರು ನೇರವಾಗಿ ಜಮೀನುಗಳಿಗೆ ನುಗ್ಗಿ ಈ ಅವಾಂತರ ಸೃಷ್ಟಿಯಾಗಿದೆ, ಸಂಬಂಧಪಟ್ಟವರು ಸೂಕ್ತ ಪರಿಹಾರ ನೀಡಬೇಕೆಂದರು.