ಲಿಂಕ್ ಕೆನಾಲ್ ಎಕ್ಸ್ಪ್ರೆಸ್ ನ ಚಾನಲ್ ನ ಡಯಾಮೀಟರ್ ಅನ್ನು ನಾನು ಅವಲೋಕಿಸಿದ್ದೇನೆ. ಎಲ್ಲಿಯೂ ಲೋಪವಿಲ್ಲ ಸಮತಲದಲ್ಲಿ ನೀರು ಹರಿಯಲಿದೆ ರೈತರಿಗೆ ಆತಂಕ ಬೇಡ ಎಂದು ಉಪಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.ಅವರು ಗುಬ್ಬಿ ಸಮೀಪದ ಲಿಂಕೆನಲ್ ಎಕ್ಸ್ಪ್ರೆಸ್ ನೀರಾವರಿ ಯೋಜನೆಯ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನ ನೀರಾವರಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಬಳಿಕ ಶುಕ್ರವಾರ ಮಧ್ಯಾಹ್ನ ಸುಮಾರು 1.30 ರ ಸಮಯದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳು ನನಗೆ ಒಂದೇ ಆಗಿದೆ. ಚಾನಲ್ ನಲ್ಲಿ ನೀರು ಹರಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.