ಸಚಿವ ಸ್ಥಾನದ ಅಗತ್ಯತೆ ನನಗಿಲ್ಲ, ಸಚಿವ ಸ್ಥಾನ ಕಳೆದುಕೊಂಡಿರುವುದಕ್ಕೆ ಚಿಂತೆಯೂ ಇಲ್ಲ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ತಮ್ಮ ಅಂತಾರಾಳದ ಮಾತುಗಳನ್ನ ಹೊರ ಹಾಕಿದರು. ಅವರು ತುಮಕೂರು ನಗರದ ಕ್ಯಾತ್ಸಂದ್ರದ ತಮ್ಮ ನಿವಾಸಕ್ಕೆ ಆಗಮಿಸಿದ್ದ ವಿವಿಧ ಮಠಗಳ ಮಠಾಧೀಶರೊಂದಿಗೆ ರಾಜಕೀಯ ಸ್ಥಿತ್ಯಂತರದ ಬಗ್ಗೆ ಚರ್ಚಿಸಿ ಬಳಿಕ ಮಾಧ್ಯಮದವರೊಂದಿಗೆ ಭಾನುವಾರ ಸಂಜೆ 4 ರ ಸಮಯದಲ್ಲಿ ಮಾತನಾಡಿದರು. ಇದಕ್ಕೂ ಮುನ್ನ ಹೊಸದುರ್ಗದ ಕನಕಪೀಠದ ಈಶ್ವರನಂದಪುರಿ ಸ್ವಾಮೀಜಿ ಅವರು ಮಾತನಾಡಿ ಮಾಜಿ ಸಚಿವ ಕೇಂದ್ರ ರಾಜಣ್ಣ ಅವರನ್ನ ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಇಡೀ ರಾಜ್ಯದ ಜನರಿಗೆ ಶೋಷಿತರಿಗೆ, ಹಿಂದುಳಿದವರಿಗೆ ದಲಿತರಿಗೆ ಅತ್ಯಂತ ಆಘಾತಕಾರಿ ವಿಚಾರವಾಗಿದೆ ಎಂದು ಎಂದರು.