ಕೊಳ್ಳೇಗಾಲ ಪಟ್ಟಣದ ಮೋಳೆ ಬಡಾವಣೆಯಲ್ಲಿ ಗುರುವಾರ ರಾತ್ರಿ ಗಂಡನೋರ್ವ ತನ್ನ ಪತ್ನಿಗೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮಹದೇವಮ್ಮ (23) ಎಂಬ ಮಹಿಳೆ ಹಲ್ಲೆಗೆ ಒಳಗಾಗಿದ್ದು, ಈಕೆಯ ಪತಿ ರವಿ ಎಂಬಾತನು ಮಚ್ಚಿ ಹಾಗೂ ಮನೆಯಲ್ಲಿದ್ದ ಕುಡುಗೋಲು ಬಳಸಿ ಹಲ್ಲೆ ನಡೆಸಿದ ಎನ್ನಲಾಗಿದೆ. ಇವರಿಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಮಾತಿನ ಚಕಮಕಿ ಉಂಟಾಗಿ, ರವಿ ಕುಡುಗೋಲಿನಿಂದ ಪತ್ನಿಗೆ ತೀವ್ರವಾಗಿ ಗಾಯಗೊಳಿಸಿದ್ದಾನೆ. ಗಲಾಟೆ ದೃಶ್ಯವನ್ನು ಕಂಡ ಸ್ಥಳೀಯರು ತಕ್ಷಣ ಮಹಿಳೆಗೆ ಆಸ್ಪತ್ರೆಗೆ ಕರೆದೊಯ್ಯಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಿದ್ದಾರೆ.